ಭಾನುವಾರ, ಫೆಬ್ರವರಿ 18, 2024

ಯಾರು ನಮ್ಮವರಲ್ಲ

 ಬಾಳ ಪಯಣದಲಿ ಯಾರು ನಮ್ಮವರಲ್ಲ

ಯಾರ ನೋವು ಯಾರೂ ಸಲಹರು

ಯಾರ ಕಷ್ಟಕ್ಕೆ ಯಾರೂ ಹೆಗಲುಕೊಡರು

ಅವರು ನಮ್ಮವರು ಇವರು ನಮ್ಮವರು

ಅನ್ನೋ ಭ್ರಮೆ ಯೇ ಮನಸ್ಸಿಗೆ ಮುದ 

ಒಮ್ಮೊಮ್ಮೆ ಅಳಲು ಹೆಗಲು ಬೇಕಿದ್ದರು

ಯಾರ ಹೆಗಲು ಸಾಂತ್ವನ ನೀಡದು

ಅತ್ತಾಗ ಕಣ್ಣೊರೆಸೊ ಕೈ ಬೇಕಿದೆ

ಯಾವ ಕೈಯೂ ನಮ್ಮವರದು ಅನಿಸದೆಹೋಯಿತು

ಕಷ್ಟ ಕೇಳಿ ಮರುಗುವ ಮನ ಬೇಕಿದೆ

ಹುಡುಕುತ ನಾ ಒಂಟಿಯಾಗಿ  ಸಾಗುತಿರುವೆ


ಬದುಕಿನ ಖುಷಿ

 ನೋವ ಮೆಟ್ಟಿ ನಗುತಿರಲು 

ಬದುಕದು ಬಲು ಸುಂದರ

ನೋವ ನೆನಪಿಸುತ ಕುಳಿತಿರಲು

ಪ್ರತಿ ಕ್ಷಣವದು ನೋವಿನ ಹಂದರ

ಎಲ್ಲ ಮರೆತು ಜೀವನ ಅನುಭವಿಸು ಆಗ

ಆಗುವುದು ಖುಷಿಯ ಸಾಕ್ಷಾತ್ಕಾರ



ಭಾನುವಾರ, ಜನವರಿ 28, 2024

ಕವನ - ನೆನಪು

ಬರೆಯದೆ ಕಾಲ ಕೆಲವಾಯ್ತು
 ಗೀಚಲು ಕವನದ ನೆನಪಾಯ್ತು 
ಅಂದ್ಯಾರೋ ಶಹಬ್ಬಾಸ ಎಂದರು 
ಇಂದ್ಯಾರೋ ಬರೆಯಲಿಲ್ಲ ಎಕೆಂದರೂ 
ಮನದ ದುಗುಡ ಮರೆಯಲಿದು ದಾರಿ 
ಆದರೂ ನಿನ್ನ ನೆನಪಿಸುತಿದೆ ಸಾರಿಸಾರಿ..

ಶುಕ್ರವಾರ, ಸೆಪ್ಟೆಂಬರ್ 10, 2010

"ನಿನ್ನೊಳಗೆ ನಾನು"

ಒಂದರೆಗಳಿಗೆ ನಿನ್ನ ಮನದ ಪ್ರೀತಿ ನಾನಾಗಿ ನನ್ನ ಪ್ರೀತಿಯೆಡೆಗೆ ನಿನ್ನ ಸೆಳೆಯುವಾಸೆ ಒಂದರೆಗಳಿಗೆ ನಿನ್ನ ಕಣ್ಣ ದ್ರಷ್ಟಿ ನಾನಾಗಿ ನನ್ನೆಡೆಗೆ ಒಲವ ದ್ರಷ್ಟಿ ಹರಿಸುವಾಸೆ, ಒಂದರೆಗಳಿಗೆ ನಿನ್ನ ಮನದ ಸವಿನೆನಪು ನಾನಾಗಿ ನನ್ನೇ ಪದೆಪದೆ ನೆನಪಿಸಿಕೊಳ್ಳುವಾಸೆ, ಒಂದರಗಳಿಗೆ ನಿನ್ನ ಮನದ ಮಾತು ನಾನಾಗಿ ಬಾವನೆಗಳ ನನ್ನೊಂದಿಗೆ ಹಂಚಿಕೊಳ್ಳುವಾಸೆ, ಒಂದರೆಗಳಿಗೆ ಗೆಳೆಯ ನಿನಿಲ್ಲು ನಾನಾಗಿ ಅರಿಯದೆ ಹುಟ್ಟುವುದು ಪ್ರೀತಿಯಲ್ಲಿ ಕಳೆದೊಗುವಾಸೆ.

"ಉತ್ತರದ ನಿರೀಕ್ಷೆ"

ಮೌನವೇ ನೀ ಒಮ್ಮೆ ಬಾಯ್ಬಿಟ್ಟು ಮಾತನಾಡಲಾರೆಯ?
ನನಗಾಗಿ ನಿನ್ನೊಮ್ಮೆ ಕ್ಷಮೆಯಿತ್ತು ಬದಲಾಗಾಲಾರೆಯ?
ನಿನನ್ನ ಉಸಿರೆನ್ನೋದು ತಿಳಿದು ಮರೆತೆಯೇನೋ?
ನಿನ್ನ ಪ್ರಿತಿಗಾಗಿ ಕಾತರಿಸೋಳು ನಾನು ನೆನಪಿಲ್ಲವೇನೋ?
ಈ ನನ್ನ ಪ್ರೀತಿಗೆ ನಿನ್ನ ಈ ರೀತಿ ತರವೇನು?
ಸ್ನೇಹದ ನಿನ್ನ ಈ ನಡವಳಿಕೆ ಸರಿಯೇನು?
ನೋವ ಸಹಿಸದಿಮನವು ನಿನಗಿದು ತಿಳಿಯದೆನೋ?
ಕ್ಷಣವೂ ಪರಿತಪಿಸುವುದು ಈ ಮನವು ಯಾಕೋ ಏನೋ?
ನಿನ್ನ ಬದಲಿಸುವ ಪ್ರಯತ್ನದಲ್ಲೆನಗೆ ಗೆಲುವಿಲ್ಲವೇ?
ಕ್ಷಮಿಸು ಗೆಳೆಯ ಕೊನೆತನಕ ನನ್ನೊಂದಿಗೆ ನಿನಿಲ್ಲವೇ?
ತಪ್ಪು ನನ್ನದೇ ಎಂದು ನಿನ್ನ ಮನ ಚೀರುತ್ತಿಲ್ಲವೇ?
ಮನದ ಮಾತಿಗೊಮ್ಮೆ ತಲೆಬಾಗಲಾರೆಯೇನೋ?
ನನ್ನೆಲ್ಲಾ ಪ್ರಶ್ನೆಗೆ ಉತ್ತರಿಸುವೆ ಎಂದು?
ನಿನ್ನ ಉತ್ತರಕ್ಕಾಗಿ ಕಾಯುತ್ತಿರಲೇ ಎಂದೆಂದೂ.....?

ಕೊನೆಯೆಂದು ಗೆಳೆಯಾ?

ಯಾಕೋ ತಿಳಿಯೆ ಗೆಳೆಯ ನಾನು,
ಮನದಲ್ಲಿ ನಿನ್ನ ನೆನಪೊಂದು...
ಮಿಂಚಂತೆ ಮಿಂಚಿ ಮರೆಯಾಯ್ತು...
ಅದರೀ ಕಣ್ಣಲ್ಲಿ ಕಣ್ಣಿರು...
ಮಿಂಚಂತೆ ಮರೆಯಾಗುತ್ತಿಲ್ಲ
ಜಡಿಮಳೆಯಂತೆ ಬರುತ್ತಲೇ ಇದೆ.
ಯಾಕೋ ತಿಳಿಯೆ ಗೆಳೆಯ ನಾನು,
ಮನದೊಳಗಿನ ನಿನ್ನ ನೆನಪೊಂದು...
ಗುಡುಗಂತೆ ಗುಡುಗಿತು ಒಂದರೆಕ್ಷಣ...
ಅದರೀ ಮನದೊಳಗಿನ ಕೋಲಾಹಲ...
ಗುಡುಗಿಂತ ಜಾಸ್ತಿ ಗುಡುಗುಡುತ್ತಲೇ ಇದೆ.
ನನ್ನ ಮನದೊಳಗಿನ ಮಳೆಗಾಲಕ್ಕೆ
ಕೊನೆಯೆಂದು ಗೆಳೆಯಾ?

"ಕತ್ತಲು ಬೆಳಕಿನ ವ್ಯತ್ಯಾಸ"

ನೀ ಬರುವ ಮೊದಲು ನನ್ನ ಬಾಳೆಲ್ಲ ಕತ್ತಲು,
ನೀ ಬಂದಾಗ ಮಾತ್ರ ಬೆಳಕು ಎತ್ತೆತ್ತಲು.....
ಬೆಳಕು ಕತ್ತಲಿನ ವ್ಯತ್ಯಾಸ ತಿಳಿಯಲು,
ಕಳೆದದ್ದು ಎಷ್ಟೋ ವರುಷಗಳು.....
ಕತ್ತಲಿನ ಭಯಾನಕತೆ ಕಳೆಯಲು,
ಸವೆಸಿದ ಸಮಯಗಳು ಹಲವಾರು...
ಬೆಳಕಿನ ಸುಂದರ ಕ್ಷಣವ ಸವಿಯಲು ,
ಇನ್ನು ಬೇಕು ನಿನ್ನೊಂದಿಗೆ ಸಾವಿರಾರು ವರುಷಗಳು..