ಇರುಳು ನಸುನಚುತ್ತಾ ಜಾರಿತು,
ನಿದ್ರೆಯನ್ನಂತು ನನ್ನಿಂದ ದೂರ ಮಾಡಿತು,
ಕಣ್ಮುಚ್ಚಿದರೆ ನನ್ನೆದುರು ಅವನೇ,
ಕಣ್ತೆರೆದರೆ ದೂರಾಗಲರ ತಾನೆ,ರಾತ್ರಿಯಲ್ಲಿ ನಾ ಪಡುವ ಪಾಡು,
ಆತನಿಗೆ ಅರ್ಥವಾಗುವ ಹಾಗೆಮಾಡು,
ನಿನಾಗಿದ್ದೆ ದೇವಾ ನನ್ನ ಕಣ್ಣಾಗಿ,
ಆದರೀಗ ಏಕೆ ನಿಂತಿಹೆ ಕಲ್ಲಾಗಿ?
ವಿರಹವೆನ್ನೋ ಪ್ರಪಾತದೊಳಗೆ ದುಡಿದಾ,
ಅತ ಮಾತ್ರ ಪರಾರಿಯಾಗಿ ಓಡಿದ,
ಪ್ರೀತಿಯ ಹೊಳೆಯನ್ನೇ ಹರಿಸಿದಾ,
ನಾ ಹೊಳೆಗಿಳಿಯುವ ಮುನ್ನ ಪ್ರಿತಿನೆ ಸಾಯಿಸಿದ,
ಇರುಳಲ್ಲಿ ಉಳಿದ ಅತ ನನ್ನ ನೆನಪಾಗಿ,
ಹಗಲಲ್ಲಿ ಓಡುವ ಮರೆಯಾಗಿ,
ಕಾರಣವ ಈಗ ಹುಡುಕಾಡುತ್ತಿರುವೆ,
ಕಳೆದು ಹೋದ ನಿದ್ರೆಯ ತಡಕಾಡುತ್ತಿರುವೆ,
ದಿನಕಳೆದಂತೆ ನಿದ್ರೆಗಾಗಿ ತಡಕಾಡುವ ಇರುಳು,
ಕಳೆದು ಹೋದ ಬದುಕ ಹುಡುಕಾಡುವ ಹಗಲು,
ಮತ್ತದೇ ರಾತ್ರಿ ಸೂರ್ಯ ಮರೆಯಾದ,
ಚಂದ್ರ ನಗುನಗುತ್ತ ಬಾನೇರಿದ,
ಕಣ್ಣು ಮಾತ್ರ ಮುಚ್ಚಲು ಮುಷ್ಕರ ಹೂಡಿವೆ,
ಅವು ಶುನ್ಯದತ್ತ ದ್ರಷ್ಟಿ ಬೀರಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಹರಿವ ನೀರು ಮಡುವಿನಲ್ಲೀಳಿದಾಗ ನಿ೦ತ ಭ್ರಮೆ ತತ್ಕಾಲದ್ದು. ಮದುವಿನಲ್ಲೇ ಶಾ೦ತವಾಗಿ ಏರಿ ಬೆಳೆದು ವಿಸ್ತಾರವಾಗಿ ಆ ಮಡುವನ್ನೆ ತು೦ಬಿ ಮು೦ದೆ ಹರಿಯಬೇಕು ಸಾಗರದೆಡೆಗಿನ ಪಯಣ. ಅದಕ್ಕಾಗಿ ನಿದ್ರೆಗಳ ಕಳೆದುಕೊಳ್ಳಬೇಕಿಲ್ಲ. ಮಡು-ಬ೦ಡೆ-ಬೆಟ್ಟ ಎಲ್ಲಾ ಸಾದಿಯಲ್ಲಿ ಇದ್ದದ್ದೆ. ತರುಲಕೆಗಳ ಬುಡಕ್ಕಿಷ್ಟು ಉಣ ಬಡಿಸಿ, ಭುವಿಗಷ್ಟು ಇ೦ಗಿಸಿ, ಬ೦ಡೆ ಕರಗಿಸಿ, ಮದುವ ಮ್ತು೦ಬಿ ಮೀರಿಸಿ, ಬೆಟ್ಟವಾ ಧುಮಿಕ್ಕಿ, ತಡೆಯ ಎದುರಿಸಿ ಹರಿದು, ಸಾಗರವ ಸೇರಿ ಧನ್ಯತೆಯ ಜೀವನ ಹೊ೦ದುವದೇ ನದಿಯ ಕಾಯ. ಶೂನ್ಯದ ನೋಟ ವಿಸ್ತಾರಕ್ಕೆ ತಿರುಗಲಿ.
ಪ್ರತ್ಯುತ್ತರಅಳಿಸಿKandita tirugutte.
ಪ್ರತ್ಯುತ್ತರಅಳಿಸಿ