ಶುಕ್ರವಾರ, ಸೆಪ್ಟೆಂಬರ್ 10, 2010

"ನಿನ್ನೊಳಗೆ ನಾನು"

ಒಂದರೆಗಳಿಗೆ ನಿನ್ನ ಮನದ ಪ್ರೀತಿ ನಾನಾಗಿ ನನ್ನ ಪ್ರೀತಿಯೆಡೆಗೆ ನಿನ್ನ ಸೆಳೆಯುವಾಸೆ ಒಂದರೆಗಳಿಗೆ ನಿನ್ನ ಕಣ್ಣ ದ್ರಷ್ಟಿ ನಾನಾಗಿ ನನ್ನೆಡೆಗೆ ಒಲವ ದ್ರಷ್ಟಿ ಹರಿಸುವಾಸೆ, ಒಂದರೆಗಳಿಗೆ ನಿನ್ನ ಮನದ ಸವಿನೆನಪು ನಾನಾಗಿ ನನ್ನೇ ಪದೆಪದೆ ನೆನಪಿಸಿಕೊಳ್ಳುವಾಸೆ, ಒಂದರಗಳಿಗೆ ನಿನ್ನ ಮನದ ಮಾತು ನಾನಾಗಿ ಬಾವನೆಗಳ ನನ್ನೊಂದಿಗೆ ಹಂಚಿಕೊಳ್ಳುವಾಸೆ, ಒಂದರೆಗಳಿಗೆ ಗೆಳೆಯ ನಿನಿಲ್ಲು ನಾನಾಗಿ ಅರಿಯದೆ ಹುಟ್ಟುವುದು ಪ್ರೀತಿಯಲ್ಲಿ ಕಳೆದೊಗುವಾಸೆ.

"ಉತ್ತರದ ನಿರೀಕ್ಷೆ"

ಮೌನವೇ ನೀ ಒಮ್ಮೆ ಬಾಯ್ಬಿಟ್ಟು ಮಾತನಾಡಲಾರೆಯ?
ನನಗಾಗಿ ನಿನ್ನೊಮ್ಮೆ ಕ್ಷಮೆಯಿತ್ತು ಬದಲಾಗಾಲಾರೆಯ?
ನಿನನ್ನ ಉಸಿರೆನ್ನೋದು ತಿಳಿದು ಮರೆತೆಯೇನೋ?
ನಿನ್ನ ಪ್ರಿತಿಗಾಗಿ ಕಾತರಿಸೋಳು ನಾನು ನೆನಪಿಲ್ಲವೇನೋ?
ಈ ನನ್ನ ಪ್ರೀತಿಗೆ ನಿನ್ನ ಈ ರೀತಿ ತರವೇನು?
ಸ್ನೇಹದ ನಿನ್ನ ಈ ನಡವಳಿಕೆ ಸರಿಯೇನು?
ನೋವ ಸಹಿಸದಿಮನವು ನಿನಗಿದು ತಿಳಿಯದೆನೋ?
ಕ್ಷಣವೂ ಪರಿತಪಿಸುವುದು ಈ ಮನವು ಯಾಕೋ ಏನೋ?
ನಿನ್ನ ಬದಲಿಸುವ ಪ್ರಯತ್ನದಲ್ಲೆನಗೆ ಗೆಲುವಿಲ್ಲವೇ?
ಕ್ಷಮಿಸು ಗೆಳೆಯ ಕೊನೆತನಕ ನನ್ನೊಂದಿಗೆ ನಿನಿಲ್ಲವೇ?
ತಪ್ಪು ನನ್ನದೇ ಎಂದು ನಿನ್ನ ಮನ ಚೀರುತ್ತಿಲ್ಲವೇ?
ಮನದ ಮಾತಿಗೊಮ್ಮೆ ತಲೆಬಾಗಲಾರೆಯೇನೋ?
ನನ್ನೆಲ್ಲಾ ಪ್ರಶ್ನೆಗೆ ಉತ್ತರಿಸುವೆ ಎಂದು?
ನಿನ್ನ ಉತ್ತರಕ್ಕಾಗಿ ಕಾಯುತ್ತಿರಲೇ ಎಂದೆಂದೂ.....?

ಕೊನೆಯೆಂದು ಗೆಳೆಯಾ?

ಯಾಕೋ ತಿಳಿಯೆ ಗೆಳೆಯ ನಾನು,
ಮನದಲ್ಲಿ ನಿನ್ನ ನೆನಪೊಂದು...
ಮಿಂಚಂತೆ ಮಿಂಚಿ ಮರೆಯಾಯ್ತು...
ಅದರೀ ಕಣ್ಣಲ್ಲಿ ಕಣ್ಣಿರು...
ಮಿಂಚಂತೆ ಮರೆಯಾಗುತ್ತಿಲ್ಲ
ಜಡಿಮಳೆಯಂತೆ ಬರುತ್ತಲೇ ಇದೆ.
ಯಾಕೋ ತಿಳಿಯೆ ಗೆಳೆಯ ನಾನು,
ಮನದೊಳಗಿನ ನಿನ್ನ ನೆನಪೊಂದು...
ಗುಡುಗಂತೆ ಗುಡುಗಿತು ಒಂದರೆಕ್ಷಣ...
ಅದರೀ ಮನದೊಳಗಿನ ಕೋಲಾಹಲ...
ಗುಡುಗಿಂತ ಜಾಸ್ತಿ ಗುಡುಗುಡುತ್ತಲೇ ಇದೆ.
ನನ್ನ ಮನದೊಳಗಿನ ಮಳೆಗಾಲಕ್ಕೆ
ಕೊನೆಯೆಂದು ಗೆಳೆಯಾ?

"ಕತ್ತಲು ಬೆಳಕಿನ ವ್ಯತ್ಯಾಸ"

ನೀ ಬರುವ ಮೊದಲು ನನ್ನ ಬಾಳೆಲ್ಲ ಕತ್ತಲು,
ನೀ ಬಂದಾಗ ಮಾತ್ರ ಬೆಳಕು ಎತ್ತೆತ್ತಲು.....
ಬೆಳಕು ಕತ್ತಲಿನ ವ್ಯತ್ಯಾಸ ತಿಳಿಯಲು,
ಕಳೆದದ್ದು ಎಷ್ಟೋ ವರುಷಗಳು.....
ಕತ್ತಲಿನ ಭಯಾನಕತೆ ಕಳೆಯಲು,
ಸವೆಸಿದ ಸಮಯಗಳು ಹಲವಾರು...
ಬೆಳಕಿನ ಸುಂದರ ಕ್ಷಣವ ಸವಿಯಲು ,
ಇನ್ನು ಬೇಕು ನಿನ್ನೊಂದಿಗೆ ಸಾವಿರಾರು ವರುಷಗಳು..

"ವ್ಯಥೆಯಾದ ಕಥೆಯೊಂದಿಗೆ ಮನದಾಳದ ಹಾರೈಕೆ"

ಮನವೊಂದು ಕಥೆ ಹೇಳ ಹೊರಟಿದೆ,
ಆದರೆ ಕೇಳುವ ಮನವಿಲ್ಲದೆ ಚಡಪಡಿಸಿದೆ,
ಕೇಳುವ ಮನವಿಂದು ಹೇಳಕೆಳದೆ ದೂರಾಗಿದೆ,
ನನ್ನ ಬಾಳಿನ ಕಥೆ ಅದಕು ಬೇಸರ ಮೂಡಿದೆ,
ಬೆಳಕಲ್ಲು ದಾರಿ ಕಾಣದೆ ಕುಳಿತಿದ್ದೆ,
ಕತ್ತಲಲ್ಲೂ ಕಣ್ಣು ಮುಚ್ಚದೆ ಕಾಯುತ್ತಿದ್ದೆ,
ಬಯಸಿಯುಕೂಡ... ಬಯಸದೆ.......
ಅರಿತು ಕೂಡ... ಅರಿಯದೆ.......
ನನ್ನ ಬಾಳಿನೆಡೆಗೆ ನಗುತ ಬಂದೆ ನೀನು,
ದಿನವು ಕ್ಷಣವೂ ನನ್ನೇ ಮರೆತೇ ನಾನು,
ಮರೆವು ಮಾತ್ರ ಕ್ಷಣಿಕವಾಯ್ತು ನನ್ನೊಳಗೆ,
ದೂರವಾಗುವ ಆಸೆಯೊಂದು ಮೂಡಿತು ನಿನ್ನೊಳಗೆ,
ತಿಳಿಯೆನು ನಾನು ನೆನ್ನೆಡೆಗೆ ಅದೆನಂತ ಒಲವೋ,
ನೀ ದುರಾದೆ ನನ್ಯಾವ ಜನ್ಮದ ಪಾಪದ ಪಲವೋ,
ಅರಿತು ಅರಿಯದೆ ಮಾಡಿದ ಪಾಪಕ್ಕೆ ಕ್ಷಮೆನಿಡು,
ಒಂದೊಮ್ಮೆ ನನ್ನ ತಪ್ಪ ಮನ್ನಿಸಿಬಿಡು,
ಮುಂದೆಂದು ನಾ ನಿನಗಾಗಿ ಬಯಸೆನು,
ಎಲ್ಲಿದ್ದರು ಚೆನ್ನಾಗಿರು ಎಂದು ಹಾರೈಸುವೆನು