ಶುಕ್ರವಾರ, ಸೆಪ್ಟೆಂಬರ್ 10, 2010

"ನಿನ್ನೊಳಗೆ ನಾನು"

ಒಂದರೆಗಳಿಗೆ ನಿನ್ನ ಮನದ ಪ್ರೀತಿ ನಾನಾಗಿ ನನ್ನ ಪ್ರೀತಿಯೆಡೆಗೆ ನಿನ್ನ ಸೆಳೆಯುವಾಸೆ ಒಂದರೆಗಳಿಗೆ ನಿನ್ನ ಕಣ್ಣ ದ್ರಷ್ಟಿ ನಾನಾಗಿ ನನ್ನೆಡೆಗೆ ಒಲವ ದ್ರಷ್ಟಿ ಹರಿಸುವಾಸೆ, ಒಂದರೆಗಳಿಗೆ ನಿನ್ನ ಮನದ ಸವಿನೆನಪು ನಾನಾಗಿ ನನ್ನೇ ಪದೆಪದೆ ನೆನಪಿಸಿಕೊಳ್ಳುವಾಸೆ, ಒಂದರಗಳಿಗೆ ನಿನ್ನ ಮನದ ಮಾತು ನಾನಾಗಿ ಬಾವನೆಗಳ ನನ್ನೊಂದಿಗೆ ಹಂಚಿಕೊಳ್ಳುವಾಸೆ, ಒಂದರೆಗಳಿಗೆ ಗೆಳೆಯ ನಿನಿಲ್ಲು ನಾನಾಗಿ ಅರಿಯದೆ ಹುಟ್ಟುವುದು ಪ್ರೀತಿಯಲ್ಲಿ ಕಳೆದೊಗುವಾಸೆ.

"ಉತ್ತರದ ನಿರೀಕ್ಷೆ"

ಮೌನವೇ ನೀ ಒಮ್ಮೆ ಬಾಯ್ಬಿಟ್ಟು ಮಾತನಾಡಲಾರೆಯ?
ನನಗಾಗಿ ನಿನ್ನೊಮ್ಮೆ ಕ್ಷಮೆಯಿತ್ತು ಬದಲಾಗಾಲಾರೆಯ?
ನಿನನ್ನ ಉಸಿರೆನ್ನೋದು ತಿಳಿದು ಮರೆತೆಯೇನೋ?
ನಿನ್ನ ಪ್ರಿತಿಗಾಗಿ ಕಾತರಿಸೋಳು ನಾನು ನೆನಪಿಲ್ಲವೇನೋ?
ಈ ನನ್ನ ಪ್ರೀತಿಗೆ ನಿನ್ನ ಈ ರೀತಿ ತರವೇನು?
ಸ್ನೇಹದ ನಿನ್ನ ಈ ನಡವಳಿಕೆ ಸರಿಯೇನು?
ನೋವ ಸಹಿಸದಿಮನವು ನಿನಗಿದು ತಿಳಿಯದೆನೋ?
ಕ್ಷಣವೂ ಪರಿತಪಿಸುವುದು ಈ ಮನವು ಯಾಕೋ ಏನೋ?
ನಿನ್ನ ಬದಲಿಸುವ ಪ್ರಯತ್ನದಲ್ಲೆನಗೆ ಗೆಲುವಿಲ್ಲವೇ?
ಕ್ಷಮಿಸು ಗೆಳೆಯ ಕೊನೆತನಕ ನನ್ನೊಂದಿಗೆ ನಿನಿಲ್ಲವೇ?
ತಪ್ಪು ನನ್ನದೇ ಎಂದು ನಿನ್ನ ಮನ ಚೀರುತ್ತಿಲ್ಲವೇ?
ಮನದ ಮಾತಿಗೊಮ್ಮೆ ತಲೆಬಾಗಲಾರೆಯೇನೋ?
ನನ್ನೆಲ್ಲಾ ಪ್ರಶ್ನೆಗೆ ಉತ್ತರಿಸುವೆ ಎಂದು?
ನಿನ್ನ ಉತ್ತರಕ್ಕಾಗಿ ಕಾಯುತ್ತಿರಲೇ ಎಂದೆಂದೂ.....?

ಕೊನೆಯೆಂದು ಗೆಳೆಯಾ?

ಯಾಕೋ ತಿಳಿಯೆ ಗೆಳೆಯ ನಾನು,
ಮನದಲ್ಲಿ ನಿನ್ನ ನೆನಪೊಂದು...
ಮಿಂಚಂತೆ ಮಿಂಚಿ ಮರೆಯಾಯ್ತು...
ಅದರೀ ಕಣ್ಣಲ್ಲಿ ಕಣ್ಣಿರು...
ಮಿಂಚಂತೆ ಮರೆಯಾಗುತ್ತಿಲ್ಲ
ಜಡಿಮಳೆಯಂತೆ ಬರುತ್ತಲೇ ಇದೆ.
ಯಾಕೋ ತಿಳಿಯೆ ಗೆಳೆಯ ನಾನು,
ಮನದೊಳಗಿನ ನಿನ್ನ ನೆನಪೊಂದು...
ಗುಡುಗಂತೆ ಗುಡುಗಿತು ಒಂದರೆಕ್ಷಣ...
ಅದರೀ ಮನದೊಳಗಿನ ಕೋಲಾಹಲ...
ಗುಡುಗಿಂತ ಜಾಸ್ತಿ ಗುಡುಗುಡುತ್ತಲೇ ಇದೆ.
ನನ್ನ ಮನದೊಳಗಿನ ಮಳೆಗಾಲಕ್ಕೆ
ಕೊನೆಯೆಂದು ಗೆಳೆಯಾ?

"ಕತ್ತಲು ಬೆಳಕಿನ ವ್ಯತ್ಯಾಸ"

ನೀ ಬರುವ ಮೊದಲು ನನ್ನ ಬಾಳೆಲ್ಲ ಕತ್ತಲು,
ನೀ ಬಂದಾಗ ಮಾತ್ರ ಬೆಳಕು ಎತ್ತೆತ್ತಲು.....
ಬೆಳಕು ಕತ್ತಲಿನ ವ್ಯತ್ಯಾಸ ತಿಳಿಯಲು,
ಕಳೆದದ್ದು ಎಷ್ಟೋ ವರುಷಗಳು.....
ಕತ್ತಲಿನ ಭಯಾನಕತೆ ಕಳೆಯಲು,
ಸವೆಸಿದ ಸಮಯಗಳು ಹಲವಾರು...
ಬೆಳಕಿನ ಸುಂದರ ಕ್ಷಣವ ಸವಿಯಲು ,
ಇನ್ನು ಬೇಕು ನಿನ್ನೊಂದಿಗೆ ಸಾವಿರಾರು ವರುಷಗಳು..

"ವ್ಯಥೆಯಾದ ಕಥೆಯೊಂದಿಗೆ ಮನದಾಳದ ಹಾರೈಕೆ"

ಮನವೊಂದು ಕಥೆ ಹೇಳ ಹೊರಟಿದೆ,
ಆದರೆ ಕೇಳುವ ಮನವಿಲ್ಲದೆ ಚಡಪಡಿಸಿದೆ,
ಕೇಳುವ ಮನವಿಂದು ಹೇಳಕೆಳದೆ ದೂರಾಗಿದೆ,
ನನ್ನ ಬಾಳಿನ ಕಥೆ ಅದಕು ಬೇಸರ ಮೂಡಿದೆ,
ಬೆಳಕಲ್ಲು ದಾರಿ ಕಾಣದೆ ಕುಳಿತಿದ್ದೆ,
ಕತ್ತಲಲ್ಲೂ ಕಣ್ಣು ಮುಚ್ಚದೆ ಕಾಯುತ್ತಿದ್ದೆ,
ಬಯಸಿಯುಕೂಡ... ಬಯಸದೆ.......
ಅರಿತು ಕೂಡ... ಅರಿಯದೆ.......
ನನ್ನ ಬಾಳಿನೆಡೆಗೆ ನಗುತ ಬಂದೆ ನೀನು,
ದಿನವು ಕ್ಷಣವೂ ನನ್ನೇ ಮರೆತೇ ನಾನು,
ಮರೆವು ಮಾತ್ರ ಕ್ಷಣಿಕವಾಯ್ತು ನನ್ನೊಳಗೆ,
ದೂರವಾಗುವ ಆಸೆಯೊಂದು ಮೂಡಿತು ನಿನ್ನೊಳಗೆ,
ತಿಳಿಯೆನು ನಾನು ನೆನ್ನೆಡೆಗೆ ಅದೆನಂತ ಒಲವೋ,
ನೀ ದುರಾದೆ ನನ್ಯಾವ ಜನ್ಮದ ಪಾಪದ ಪಲವೋ,
ಅರಿತು ಅರಿಯದೆ ಮಾಡಿದ ಪಾಪಕ್ಕೆ ಕ್ಷಮೆನಿಡು,
ಒಂದೊಮ್ಮೆ ನನ್ನ ತಪ್ಪ ಮನ್ನಿಸಿಬಿಡು,
ಮುಂದೆಂದು ನಾ ನಿನಗಾಗಿ ಬಯಸೆನು,
ಎಲ್ಲಿದ್ದರು ಚೆನ್ನಾಗಿರು ಎಂದು ಹಾರೈಸುವೆನು

ಸೋಮವಾರ, ಮಾರ್ಚ್ 22, 2010

"ಕ್ಷಮಿಸಿಬಿಡು"

ಮನದೊಳಗೆ ಸ್ನೇಹವಾಗಿ ನನ್ನೆಡೆಗೆ ಬಂದೆ
ಪ್ರೆಮವೆನ್ನೋ ಸೆಳೆಗೆ ನನ್ನೆಳೆಯೋ
ಸಾಹಸವೆತಕೋ ನಿನಗೆ???
ಭಗ್ನಸ್ನೇಹದಲಿ ನೊಂದು ನಾ ಕುಳಿತಿರಲು
ಮುಂದೊಮ್ಮೆ ಭಗ್ನಪ್ರೇಮಿಯಾಗಿ ನಾ
ಕುಳಿತಿರಬೇಕೆಂಬ ಅಸೆ ಏತಕೋ ನಿನಗೆ???
ನಾ ವಲ್ಲೆ ನನ್ನ ಮನದಲ್ಲಿ ನೀನಿಲ್ಲ
ನಿನ್ನ ಕುಳ್ಳಿರಿಸೋ ಮನವು ನನಗಿಲ್ಲ
ಬರಿದೆ ಹಟವು ಏತಕೋ ನಿನಗೆ???
ನನ್ನ ಮನವ ಬದಲಿಸುವ ಅಸೆ ಬೇಡ
ಈ ಮನವು ಏಟು ತಿಂತಿಂದು ಕಲ್ಲಾಗಿದೆ
ಕಲ್ಲ ಕರಗಿಸುವ ಚಲವೆತಕೋ ನಿನಗೆ???
ನಿನ್ನ ಮನದ ಸ್ನೇಹದ ಸ್ನೇಹಿತೆ ನಾನು
ನನ್ನ ಮನದ ಅರಿವಿನ ಗುರು ನೀನು
ಗೆಲುವಿಲ್ಲ ಮತ್ತೆತಕೋ ಒಲವು ನಿನಗೆ???
ಸ್ನೇಹದ ಹೆಜ್ಜೆ ನಿನ್ನೊಂದಿಗೆ ಇಡಲು ಹೊರಟರೆ
ನಾ ಬಿಳಲಾರೆ ಪ್ರೇಮಕೆ ಅದರೂ ನನ್ನೇ ಬಿಳಿಸೋ
ಹುಚ್ಚು ಅಸೆ ಏತಕೋ ನಿನಗೆ???
ಬಯಸದೆ ಕುಳಿತಾಗ ನೀ ಬಯಸಿ ಬಂದೆ
ನಾ ಸ್ನೇಹ ಬಯಸುವಾಗ ಪ್ರೆಮವೆನ್ನೋ
ಸ್ವಾರ್ತ ಏತಕೋ ನಿನಗೆ???
ಪ್ರೆಮಿಯಾಗಾಲಾರೆ ನಾನು ಸ್ನೇಹವ ಬಲಿಕೊಟ್ಟು
ಮೋಸಮಾಡಿ ನಿನಗೆ ನಾ ಬದುಕಲಾರೆ ಕೇಳು
ಕ್ಷಮಿಸಿಬಿಡು ನೀನು ಕ್ಷಮೆಯಿದ್ದ್ದರೆ ನನಗೆ.

"...ನೀನಾದೆ ಮರೀಚಿಕೆ..."

ಮನವೇನೋ ಓಡುತ್ತಿದೆ ನೆನಪುಗಳೊಂದಿಗೆ ಸಾಗುತ್ತಿದೆ,
ಹ್ರದಯವೇನೋ ಹೋಗುತ್ತಿದೆ ಅವನೊಂದಿಗೆ ಜಾರುತ್ತಿದೆ,
ಕಳೆದ ಅಂದಿನ ದಿನಗಳು ಮತ್ತೆ ಮತ್ತೆ ಬರಬಾರದೆ,
ಕಳೆದೋದ ಪ್ರಿತಿಯೆಡೆಗೆ ನನ್ನ ಕರೆದೊಯ್ಯಬಾರದೆ,
ಎಷ್ಟು ಹಗಲಿರುಳು ಕಳೋದೊದವು ನೆನಪಿಲ್ಲ,
ಕಳೆದೋದ ಆ ದಿನಗಳ ಕ್ಷಣವನ್ನು ನಾ ಮರೆತಿಲ್ಲ,
ನಲಿವ್ಯಾವುದು ನೋವ್ಯಾವುದು ಗೊತ್ತೇ ಆಗಲಿಲ್ಲ,
ಅವನೊಂದಿಗಿದ್ದಾಗ ಅದ್ಯಾವುದರ ಅರಿವೇ ಇರಲಿಲ್ಲ,
ಅವನೊಂದಿಗಿದ್ದಾಗ ವರ್ಷಗಳೆಲ್ಲ ದಿನಗಳಾಗಿ ಹೋದವು,
ದಿನಗಳೆಲ್ಲ ಕ್ಷಣಗಳಾಗಿ ಇಗೆಲ್ಲವು ಮರೆಯಗೊದವು,
ನನ್ನೊಂದಿಗಿದ್ದದ್ದು ಬಲುಕಡಿಮೆ ಸಮಯವೂ,
ಇಂದೂ ಅವನ ನೆರಳನ್ನು ಕೂಡ ಮರೆತಿಲ್ಲ ಈ ನಯನವು,
ನಾನೆಂದು ಕರೆಯರಲಾರೆ ಅವನ ಬಾ ನೀನೆಂದು,
ಗೊತ್ತವನಿಗೆ ನನ್ನ ಹ್ರದಯದ ಬಡಿತ ಅವನೆಂದು,
ಅಂದು ನನ್ನ ಹ್ರದಯವೇ ನಿನೆನ್ನುತಿದ್ದನವನು,
ಹ್ರದಯದ ಮಾತಿಂದು ಅರ್ಥ ಮಾಡಿಕೊಳ್ಳದೆ ಹೋದನವನು,
ಎಲ್ಲರ ಪ್ರಿತಿಯನ್ನ ಕಡೆಗಣಿಸಿದೆ ನಾ ಅವನಿದ್ದಾಗ,
ಮರೆತಿಂದು ನನ್ನೇ ಕಡೆಗನಿಸಿದನವ ಬೇಕಿದ್ದಾಗ,
ಹಂಚಿಕೊಳ್ಳಲು ಅವನೊಂದಿಗೆ ವಿಷಯ ಹಲವಿಹುದು,
ನೋವ ಮರೆಸುವ ದಿವ್ಯಶಕ್ತಿ ಅವನ ಮಾತಿಗಿಹುದು,
ಆದರಿಂದು ಬರೀ ನೆನಪುಗಳೊಂದಿಗೆ ಮಾತನಾಡಬೇಕು,
ಕಳೆದೋದ ದಿನಗಳ ಸವಿಯೊಂದಿಗೆ ಬದುಕಬೇಕು,
ಅವನೊಂದಿಗೆ ಕಳೆದದ್ದು ನೆನಪೆನ್ನೋದಕ್ಕೆ ನೆಪವಾಯ್ತು,
ನಾ ಕಂಡ ಕನಸು ಅವನೊಂದಿಗೆ ಮರಿಚಿಕೆಯಾಯ್ತು.

ಸೋಮವಾರ, ಮಾರ್ಚ್ 8, 2010

"ಅವನು - ನೀನು"

ನನ್ನ ಹಾಡಿನ ಪಲ್ಲವಿಯವನು,
ನನ್ನ ಕತೆಯ ನಾಯಕನವನು,
ನನ್ನ ಕವಿತೆಯ ಸಾಲವನು,
ನನ್ನ ಬರವಣಿಗೆಯ ಪದ ಅವನು,
ಆದರಿಂದು ಅವನಿಲ್ಲ ಗೆಳೆಯ,
ಆ ಜಾಗವ ನೀ ತುಂಬಿರಲು
ನನಗವನು ಬೇಕಿಲ್ಲ.

ಎಲ್ಲಿ ಹೋದನು ಅವನು?

ಎಲ್ಲಿ ಹೋದನು ಅವನು?
ಬದುಕಿನ ಪಾಠ ಕಲಿಸಿದೊನು,
ಬಾಳಲ್ಲಿ ಪ್ರೀತಿ ಹೊಳೆ ಹರಿಸಿದೊನು,
ಬದುಕೋ ಸ್ಪೂರ್ತಿ ತುಂಬಿದೊನು,
ನಗುವಿಗೆ ಜೀವ ತಂದೊನು,
ಎಲ್ಲಿ ಹೋದನು ಅವನು?
ಅರಿವಿಲ್ಲದೆ ಹ್ರದಯಕ್ಕೆ ಲಗ್ಗೆ ಇತ್ತೋನು,
ಮೈಮನಸ್ಸು ಅವರಿಸಿಕೊಂಡೋನು,
ಮಾತಲ್ಲಿ ಜೇನಿನ ಸಿಹಿ ಹರಿಸೋನು,
ಒಂಟಿತನಕ್ಕೆ ಸಂಗಾತಿಯಾಗಿ ಹೆಜ್ಜೆ ಇತ್ತೋನು,
ಎಲ್ಲಿ ಹೋದನು ಅವನು?
ನೋಟದಲ್ಲಿ ಹಿತವಾಗಿ ಇರಿಯುವವನು,
ಮಾತಿನಲ್ಲಿ ಮತ್ತನ್ನು ತರಿಸೋನು,
ನಗುವಲ್ಲಿ ಜಗವನ್ನು ಗೆಲ್ಲೋನು,
ಪ್ರಿತಿಲಿ ಎಲ್ಲರನ್ನು ಮಿರಿಸೋನು,
ಎಲ್ಲಿ ಹೋದನು ಅವನು?
ಮರೆಯಲಾಗದ ಹಾಗೆ ಬಂದು
ನನ್ನೇ ಮರೆವಂತೆ ಮಾಡಿ
ಮರೆಯಾಗಿ ನಿಂತಿಹನು.

ಸೋಮವಾರ, ಮಾರ್ಚ್ 1, 2010

"ಹುಡುಕುತಿರುವೆ ಉತ್ತರ"

ತಿಳಿದು ತಿಳಿದು ಮನವು ಜಾರುತಿಹುದು ನಿನ್ನೆಡೆಗೆ,
ತಿಳಿದು ತಿಳಿದು ನಿ ಬಾರೆಯೆಂದು ನನ್ನೆಡೆಗೆ,
ಬರಿದೆ ಏಕೆ ಛಲವು ನಿನಗೆ ಓ ಮನವೇ,
ಬಿಟ್ಟುಬಿಡು ಅವನ ಪಾಡಿಗವನ ಓ ಒಲವೇ,
ನಗುವ ಮೊಗದ ಹಿಂದೆ ಏನೋ ನೋವಿನ ಕತೆಯು,
ಮಾತಾಡೋ ಮನದ ಒಳಗೆ ಒಲ್ಲೆ ಎನ್ನೋ ವ್ಯತೆಯು,
ಇದ ತಿಳಿದು ತಿಳಿದು ಕೆಣಕದಿರು ನಿ ಚಲವೇ,
ಒಂಟಿತನವೂ ಕಷ್ಟವಾದರೂ ಬದುಕಬೇಕು ಜೀವವೇ,
ನನಗಿಲ್ಲಿ ನೋಟ ಹರಿಸಿದರೂ ಯಾರಲ್ಲೂ ಒಲವಿಲ್ಲ,
ನೀನಿಲ್ಲದೆ ಇ ನನ್ನ ಜೀವದ ಸ್ನೇಹಕೆ ಬಲವಿಲ್ಲ,
ಒಲವೆಲ್ಲ ಕೊನೆ ಇಲ್ಲದೆ ನಿನ್ನೆಡೆಗೆ ಹರಿಯುತ್ತಿದೆ,
ಮರೆತುಬಿಡು ಮನವೆಂದರು ಹ್ರದಯ ಓಡುತ್ತಿದೆ,
ತಿಳಿಯು ಮನವೇ ಅವನೋಲವು ನಿನ್ನೆಡೆಗಿಲ್ಲ,
ನಿನ್ನೊಲವಿಗೆ ಅವನೊಳಗೆ ಬೆಲೆಯೂ ಇಲ್ಲ,
ಬೆಲೆಯ ಕಳೆದು ವರುಷಗಳೇ ಮಾತಿಲ್ಲದೆ ಕಳೆದವು,
ಕಳೆದೋದ ವರುಷಗಳ ನಡುವೆ ಹುಡುಕು ಸಿಗುವವು,
ನಿನ್ನ ನಲಿವು ಅವನ ಪ್ರೀತಿ ಕಳೆದಲ್ಲಿ ಹುಡುಕು,
ಒಲವು ಸಿಗದೊದರು ಸಿಗಬಹುದು ಉತ್ತರವೂ.

ಸೋಮವಾರ, ಫೆಬ್ರವರಿ 22, 2010

ಸ್ನೇಹ ಪ್ರೀತಿಯ ಅಪೂರ್ವ ಮಿಲನ

ಮನಸಿನ ನೋವು ಭಾವನೆಯಲ್ಲಿ ಸೋತು
ಮಾತಾಗಿ ಹೊರಬಂತು ನಿನ್ನೆದುರಲ್ಲಿ,
ಮನಸಿನ ದುಗುಡ ನಿನ್ನ ಪ್ರೀತಿಗೆ ಸೋತು
ಕನ್ನಿರಾಗಿ ಹೊರಬಂತು ನಿನ್ನೆದುರಲ್ಲಿ,
ಮನದ ಮಾತು ನೋಟದಲ್ಲಿ ಸೋತು
ಕವನವಾಯ್ತು ನಿನ್ನೆದುರಲ್ಲಿ,
ಮನದ ಅಸೆ ನಿನ್ನಾಸೆಗೆ ಸೋತು
ಪ್ರೀತಿಗೆ ಶರಣಾಯ್ತು ನಿನ್ನೆದುರಲ್ಲಿ,
ಕಣ್ಮುಚ್ಚಿ ತೆರೆಯುವುದರಲ್ಲಿ
ನಾ ಸೋತು ಸೆರೆಯಾಗಿದ್ದೆ ನಿನ್ನೆದುರಲ್ಲಿ.

ಸಾಧಿಸದಿದ್ದರೆ ಸಾವಾಗೂ...

ಪ್ರೇಮವೇ ಪ್ರೀತಿಸು ಈ ಪ್ರೀತಿಯ ನಿ ಉಳಿಸು
ಉಳಿಸದೆ ಹೋದರೆ ಹೊಣೆಯು ನೀನೆ,
ಕಳೆದು ಹೋದ ಆ ದಿನಗಳ ಮರೆಸು
ಮರೆಸದೆ ಹೋದರೆ ಹೊಣೆಯು ನೀನೆ,
ಪದೆಪದೆ ಕಾಡುವ ನೆನಪನು ಕಳಿಸು
ಕಳಿಸದೆ ಹೋದರೆ ಹೊಣೆಯು ನೀನೆ,
ಕಣ್ಣಲಿ ಜಾರುವ ಕಂಬನಿ ಒರೆಸು
ಒರೆಸದೆ ಹೋದರೆ ಹೊಣೆಯು ನೀನೆ,
ಮನದೊಳಗೆ ಸುಡುತಿರೋ ಬೆಂಕಿಯ ಆರಿಸು
ಆರಿಸದೆ ಹೋದರೆ ಹೊಣೆಯು ನೀನೆ,
ತುಟಿಯಲಿ ಮರೆತ ನಗುವ ತರಿಸು
ತರಿಸದೇ ಹೋದರೆ ಹೊಣೆಯು ನೀನೆ,
ಬದುಕಲಿ ಕಳೆದೋದ ಸ್ಪೂರ್ತಿಯ ಕೊಡಿಸು
ಕೊಡಿಸದೇ ಹೋದರೆ ಹೊಣೆಯು ನೀನೆ,
ನೀ ಬಯಸಿದ್ದೆಲ್ಲ ಕೊಟ್ಟವಳು ನಾನು,
ನಾ ಕೇಳಿದ್ದೆಲ್ಲ ಸಾಧಿಸೋನೆ ನೀನು,
ಸಾಧಿಸದಿದ್ದರೆ ಸಾವಾಗು
ಪ್ರೀತಿಯೊಂದಿಗೆ ನನ್ನ ಕರೆದೊಯ್ಯು .

ಹಣೆಯ ಬರಹಕೆ ಹೊಣೆಯು ಯಾರು?

ಗೆಳಯನೇ ಬರೆಯುವೆ ಪುಟಾಣಿ ಪತ್ರ,
ಸಮಯವ ಸಿಕ್ಕಾಗ ಕೊಡುವೆಯ ಉತ್ರ?
ದಿನವು ಕಾಣುತಿತ್ತು ನಿನ್ನೊಂದಿಗೆ ಕನಸು,
ಇಹದ ಪರಿವೆಯೇ ಇಲ್ಲದೆ ಈ ಮನಸು,
ಇದು ಯಾರಾ ತಪ್ಪು?
ಮನದ ಕೋಣೆಯೊಳಗೆ ನಿನ್ನದೇ ನಗುವು,
ಕೇಳುತ ಕೇಳುತ ನಾನಾದೆ ತೊಟ್ಟಿಲೋಳಗಿನ ಮಗುವು,
ಹೆಜ್ಜೆಹೆಜ್ಜೆಗೂ ನೆನಪಿಸಿಕೊಳ್ಳುತ ನಿನ್ನನೆ,
ಈಗ ಮರೆತಿರುವೆ ನಾನು ನನ್ನನೆ,
ಇದು ಯಾರಾ ತಪ್ಪು?
ಪ್ರಿತಿಸುವಾಗ ನಿನಗೆ ನೆನಪಾಗಲಿಲ್ಲ ಹೆತ್ತವರು,
ನನ್ನೊಂದಿಗೆ ಎಳೆಜ್ಜೆ ಇಡು ಎಂದಾಗೆಲ್ಲಿಂದ ಬಂದರವರು,
ಪ್ರಿತಿಸಿದೆ ನಿನ್ನ ನಾ ಪ್ರೇಮಿಯಾಗಿ,
ಬಿಟ್ಟುಹೊದೆ ನೀ ನನ್ನಾ ಒಂಟಿಯಾಗಿ,
ಇದು ಯಾರಾ ತಪ್ಪು?
ಪ್ರೀತಿ ಅರಮನೆ ಕಟ್ಟುವಾಗ ಕನಸು ಶಿಲ್ಪಿಯಾಯ್ತು,
ಅರಮನೆ ಬಿದ್ದಾಗ ಬದುಕು ಪಾಠವಾಯ್ತು,
ನಿನ್ನಾ ಪ್ರಶ್ನಿಸೇನು ಪ್ರಯೋಜನ ಗೆಳೆಯಾ?
ಹಣೆಯ ಬರಹಕೆ ಹೊಣೆಯು ಯಾರು?

ನೆನಪುಗಳು

ಇಷ್ಟಕಷ್ಟಗಳ ಪರಿವಿಲ್ಲವು
ಈ ನನ್ನ ಮನಸ್ಸಿಗೆ,
ನೋವು ನಲಿವುಗಳ ಸುಳಿವಿಲ್ಲವು
ಈ ನನ್ನ ನಗುವಿಗೆ,
ನಿನ್ನ ನೆನಪುಗಳು ತುದಿಮೊದಲಿಲ್ಲದೆ ಆಗಮಿಸಲು.

ಗೊತ್ತಿಲ್ಲದೇ ಬಂದು ಗೊತ್ತಾಗೊಹಾಗೆ ಮರೆಯಾದ ಸ್ನೇಹ

ಗೊತ್ತಿಲ್ಲದೇ ಗೊತ್ತಾಗೊಹಾಗೆ
ನಿನ್ನ ಪರಿಚಯವಾಯಿತು,
ಗೊತ್ತಿದ್ದೂ ಗೊತ್ತಾಗದಂತೆ
ನಿನ್ನ ಸ್ನೇಹವಾಯಿತು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಸ್ನೇಹವು ಪ್ರೇಮವಾಯಿತು,
ಗೊತ್ತಿದ್ದೂ ಗೊತ್ತಾಗದಂತೆ
ಪ್ರೇಮವೇ ಬದುಕಾಯಿತು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಪ್ರೆಮವಿಲ್ಲದೆ ಬಾಳದಾಯಿತು,
ಗೊತ್ತಿದ್ದೂ ಗೊತ್ತಾಗದಂತೆ
ಅ ಬದುಕೇ ಉರುಳಾಯಿತು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಬದುಕನ್ನೇ ಬಲಿತೆಗೆದುಕೊಂಡಿತು,
ಗೊತ್ತಿದ್ದೂ ಗೊತ್ತಾಗದಂತೆ
ಬದುಕಿರುವ ಜೀವಂತ ಶವ ನಾನು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಗೊತ್ತಿದ್ದೂ ನನ್ನ ಬದುಕಿಗೆ
ಬಂದ ಸ್ನೇಹ ಗೊತ್ತಾಗುದರೊಳಗೆ
ಗೊತ್ತಿಲ್ಲದಂತೆ ಮರೆಯಾಯಿತು.

ನೀನಿಲ್ಲದೆ ಬಾಳಿಗೆ ಅರ್ಥವೆಲ್ಲಿ???

ನೆನಪಾದೆ ನೀ ನನ್ನ ನೋವೆಂಬ ನಲಿವಲ್ಲಿ,
ಜೊತೆಯಾದೆ ನೀ ನನ್ನ ನಗುವೆಂಬ ಅಳುವಲ್ಲಿ,
ಹೊಂಗಿರಣವಾದೆ ನೀ ನನ್ನ ಕತ್ತಲೆಯ ಬಾಳಲ್ಲಿ,
ಬಿಂಬವಾಗಿ ನಿಂತೇ ನೀ ನನ್ನ ಕಾಣಿಸದ ಕಣ್ಣಲ್ಲಿ,
ನಗುವಾದೆ ನೀ ನನ್ನ ಬಾಡಿಹೋದ ಮೊಗದಲ್ಲಿ,
ಸಂಗಾತಿಯದೆ ನೀ ನನಗೆ ಮರೆಯಲಾಗದ ಒಂಟಿತನದಲ್ಲಿ ,
ಈಗ್ಯಾಕೋ ಬದುಕಬೇಕೆನ್ನೋ ಸ್ಪೂರ್ತಿ ನನ್ನಲ್ಲಿ,
ಪ್ರತಿಷ್ಟಾಪಿಸಿಬಿಟ್ಟೆ ನಿನ್ನ ಈ ನನ್ನ ಹ್ರದಯದಲ್ಲಿ,
ದುರಾಗಿಸದಿರು ನನ್ನ ಈ ನಿನ್ನ ಬದುಕಲ್ಲಿ,
ಸಂಗಾತಿಯಾಗಿ ಉಳಿಸು ಈ ನಿನ್ನ ಬಾಳಲ್ಲಿ,
ನೀನಿಲ್ಲದೆ ಈ ಬದುಕಿಗೆ ಅರ್ಥವೆಲ್ಲಿ?

ಭಾವನೆಯೇ ಬದುಕಲ್ಲ ......ಎದ್ದೇಳು ಗೆಳೆಯಾ......

ಗೆಳೆಯಾ ಭಾವನೆಯಲ್ಲಿ ಬದುಕಿಲ್ಲ,
ಭಾವನೆಗಿಲ್ಲಿ ಕವಡೆಕಾಸಿನ ಬೆಲೆಯಿಲ್ಲ,
ಭಾವನೆಯ ದೂರೀಕರಿಸಿ ಬದುಕಿಲ್ಲಿ,
ಸ್ವಾರ್ಥಿಗಳೇ ತುಂಬಿರುವ ಜಗವಿಲ್ಲಿ,
ಭಾವನೆ ಅನ್ನೋದು ಇರಲಿ ಮನದಲ್ಲಿ,
ತೋರ್ಪಡಿಸಿ ಕೊಳ್ಳದಿರೆಂದು ಜಗಕಿಲ್ಲಿ,
ನೀ ಬಾಗಿದರೆ ಮೆಟ್ಟೂ ಜನರಿಲ್ಲಿ.
ಎದ್ದರೆ ಬಗ್ಗೋ ಜನರು ಇಹರಿಲ್ಲಿ,
ಎದ್ದೇಳು ಗೆಳೆಯಾ ಬದುಕಿಹುದು ಎದ್ದರಿಲ್ಲಿ

ಹುಡುಕುತ್ತಿರುವೆ ಕಳೆದುಹೋದ ನಿದ್ರೆಯ?

ಇರುಳು ನಸುನಚುತ್ತಾ ಜಾರಿತು,
ನಿದ್ರೆಯನ್ನಂತು ನನ್ನಿಂದ ದೂರ ಮಾಡಿತು,
ಕಣ್ಮುಚ್ಚಿದರೆ ನನ್ನೆದುರು ಅವನೇ,
ಕಣ್ತೆರೆದರೆ ದೂರಾಗಲರ ತಾನೆ,ರಾತ್ರಿಯಲ್ಲಿ ನಾ ಪಡುವ ಪಾಡು,
ಆತನಿಗೆ ಅರ್ಥವಾಗುವ ಹಾಗೆಮಾಡು,
ನಿನಾಗಿದ್ದೆ ದೇವಾ ನನ್ನ ಕಣ್ಣಾಗಿ,
ಆದರೀಗ ಏಕೆ ನಿಂತಿಹೆ ಕಲ್ಲಾಗಿ?
ವಿರಹವೆನ್ನೋ ಪ್ರಪಾತದೊಳಗೆ ದುಡಿದಾ,
ಅತ ಮಾತ್ರ ಪರಾರಿಯಾಗಿ ಓಡಿದ,
ಪ್ರೀತಿಯ ಹೊಳೆಯನ್ನೇ ಹರಿಸಿದಾ,
ನಾ ಹೊಳೆಗಿಳಿಯುವ ಮುನ್ನ ಪ್ರಿತಿನೆ ಸಾಯಿಸಿದ,
ಇರುಳಲ್ಲಿ ಉಳಿದ ಅತ ನನ್ನ ನೆನಪಾಗಿ,
ಹಗಲಲ್ಲಿ ಓಡುವ ಮರೆಯಾಗಿ,
ಕಾರಣವ ಈಗ ಹುಡುಕಾಡುತ್ತಿರುವೆ,
ಕಳೆದು ಹೋದ ನಿದ್ರೆಯ ತಡಕಾಡುತ್ತಿರುವೆ,
ದಿನಕಳೆದಂತೆ ನಿದ್ರೆಗಾಗಿ ತಡಕಾಡುವ ಇರುಳು,
ಕಳೆದು ಹೋದ ಬದುಕ ಹುಡುಕಾಡುವ ಹಗಲು,
ಮತ್ತದೇ ರಾತ್ರಿ ಸೂರ್ಯ ಮರೆಯಾದ,
ಚಂದ್ರ ನಗುನಗುತ್ತ ಬಾನೇರಿದ,
ಕಣ್ಣು ಮಾತ್ರ ಮುಚ್ಚಲು ಮುಷ್ಕರ ಹೂಡಿವೆ,
ಅವು ಶುನ್ಯದತ್ತ ದ್ರಷ್ಟಿ ಬೀರಿವೆ.

ಪುಟ್ಟ ಜಾಗ

ಎಲ್ಲಿಯೋ ಹುಡುಕುತಿದ್ದೆ
 ಹಾಗೆಂದು ಕಳೆದು ಹೋಗಿರಲಿಲ್ಲ,
ಕಳೆದು ಹೋದದ್ದೇ ಹುಡುಕಬೇಕೆಂಬ
 ನಿಯಮವೇನಿರಲಿಲ್ಲ,
ನನ್ನ ಭಾವನೆಯಲ್ಲಿ ಹುಟ್ಟಿದ
 ಕಂದಮ್ಮಗಳಿಗೆ ಮನೆಯಿರಲಿಲ್ಲ
ಹುಡುಕುತಿದ್ದೆ ನಾನು 
ಹಾಗೆಂದು ಸಿಗದೇ ಏನು ಹೋಗಲಿಲ್ಲ,
ಸಿಕ್ಕಿತೊಂದು ಪುಟ್ಟ ಜಾಗ 
ನನ್ನ ಕವನಗಳೆಂಬ ಕಂದಮ್ಮಗಳಿಗೆ
ಅದು ಸಿಕ್ಕು ಕೂಡ 
ನನ್ನ ಕಂದಮ್ಮಗಳ ಬಿಡದೆ ಹೋದರೆ 
ತಪ್ಪಲ್ಲವೇ??

ವಿಪರ್ಯಾಸ

ಇಂದು ಅರಳಿ ಕನಿಷ್ಠ ದಿನದ
ಬದುಕ ಹೊಂದಿರುವ ಹೂವಂತೆ
ನೀನಾದೆ ನನ್ನ ಬಾಳಿಗೆ ಗೆಳತಿ,
ಒಂದೊಮ್ಮೆ ಮೊಗ್ಗಾಗಿ ಮಗುವಂತೆ
ನನ್ನ ಸೆಳೆದೆ,
ಮತ್ತೊಮ್ಮೆ ಹೂವಾಗಿ ಅರಳಿ
ನನ್ನೇ ಆಕರ್ಷಿಸಿದೆ,
ನಾ ಹತ್ತಿರ ಬರುವಾಗ ನಿ
ಯಾರದೋ ಮುಡಿಸೇರಿದೆ.