ಸೋಮವಾರ, ಫೆಬ್ರವರಿ 22, 2010

ಗೊತ್ತಿಲ್ಲದೇ ಬಂದು ಗೊತ್ತಾಗೊಹಾಗೆ ಮರೆಯಾದ ಸ್ನೇಹ

ಗೊತ್ತಿಲ್ಲದೇ ಗೊತ್ತಾಗೊಹಾಗೆ
ನಿನ್ನ ಪರಿಚಯವಾಯಿತು,
ಗೊತ್ತಿದ್ದೂ ಗೊತ್ತಾಗದಂತೆ
ನಿನ್ನ ಸ್ನೇಹವಾಯಿತು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಸ್ನೇಹವು ಪ್ರೇಮವಾಯಿತು,
ಗೊತ್ತಿದ್ದೂ ಗೊತ್ತಾಗದಂತೆ
ಪ್ರೇಮವೇ ಬದುಕಾಯಿತು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಪ್ರೆಮವಿಲ್ಲದೆ ಬಾಳದಾಯಿತು,
ಗೊತ್ತಿದ್ದೂ ಗೊತ್ತಾಗದಂತೆ
ಅ ಬದುಕೇ ಉರುಳಾಯಿತು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಬದುಕನ್ನೇ ಬಲಿತೆಗೆದುಕೊಂಡಿತು,
ಗೊತ್ತಿದ್ದೂ ಗೊತ್ತಾಗದಂತೆ
ಬದುಕಿರುವ ಜೀವಂತ ಶವ ನಾನು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಗೊತ್ತಿದ್ದೂ ನನ್ನ ಬದುಕಿಗೆ
ಬಂದ ಸ್ನೇಹ ಗೊತ್ತಾಗುದರೊಳಗೆ
ಗೊತ್ತಿಲ್ಲದಂತೆ ಮರೆಯಾಯಿತು.

2 ಕಾಮೆಂಟ್‌ಗಳು:

  1. ತಮ್ಮ ಕಾವ್ಯಭಾಷೆ ಚೆ೦ದವಾಗಿದೆ. ಆದರೆ ತಮ್ಮ ಕವನಗಳಲ್ಲಿ ಭಗ್ನ ಪ್ರೇಮಿಯೊಬ್ಬ ಅಡಗಿದ್ದಾನೆ. ಅವನಿ೦ದ ಸ್ವಲ್ಪ ನಿರಾಶಾವಾದಗಳು ಹೊರಹೊಮ್ಮುತ್ತಿವೆ. ಅವನನ್ನು ಹೊರಗಿಟ್ಟು ಬರೆದರೇ ಚೆ೦ದ ಸ್ಫೂರ್ತಿಯ ಕವನಗಳು ಬರುವವು.

    ಪ್ರತ್ಯುತ್ತರಅಳಿಸಿ