ಸೋಮವಾರ, ಫೆಬ್ರವರಿ 22, 2010

ಸ್ನೇಹ ಪ್ರೀತಿಯ ಅಪೂರ್ವ ಮಿಲನ

ಮನಸಿನ ನೋವು ಭಾವನೆಯಲ್ಲಿ ಸೋತು
ಮಾತಾಗಿ ಹೊರಬಂತು ನಿನ್ನೆದುರಲ್ಲಿ,
ಮನಸಿನ ದುಗುಡ ನಿನ್ನ ಪ್ರೀತಿಗೆ ಸೋತು
ಕನ್ನಿರಾಗಿ ಹೊರಬಂತು ನಿನ್ನೆದುರಲ್ಲಿ,
ಮನದ ಮಾತು ನೋಟದಲ್ಲಿ ಸೋತು
ಕವನವಾಯ್ತು ನಿನ್ನೆದುರಲ್ಲಿ,
ಮನದ ಅಸೆ ನಿನ್ನಾಸೆಗೆ ಸೋತು
ಪ್ರೀತಿಗೆ ಶರಣಾಯ್ತು ನಿನ್ನೆದುರಲ್ಲಿ,
ಕಣ್ಮುಚ್ಚಿ ತೆರೆಯುವುದರಲ್ಲಿ
ನಾ ಸೋತು ಸೆರೆಯಾಗಿದ್ದೆ ನಿನ್ನೆದುರಲ್ಲಿ.

ಸಾಧಿಸದಿದ್ದರೆ ಸಾವಾಗೂ...

ಪ್ರೇಮವೇ ಪ್ರೀತಿಸು ಈ ಪ್ರೀತಿಯ ನಿ ಉಳಿಸು
ಉಳಿಸದೆ ಹೋದರೆ ಹೊಣೆಯು ನೀನೆ,
ಕಳೆದು ಹೋದ ಆ ದಿನಗಳ ಮರೆಸು
ಮರೆಸದೆ ಹೋದರೆ ಹೊಣೆಯು ನೀನೆ,
ಪದೆಪದೆ ಕಾಡುವ ನೆನಪನು ಕಳಿಸು
ಕಳಿಸದೆ ಹೋದರೆ ಹೊಣೆಯು ನೀನೆ,
ಕಣ್ಣಲಿ ಜಾರುವ ಕಂಬನಿ ಒರೆಸು
ಒರೆಸದೆ ಹೋದರೆ ಹೊಣೆಯು ನೀನೆ,
ಮನದೊಳಗೆ ಸುಡುತಿರೋ ಬೆಂಕಿಯ ಆರಿಸು
ಆರಿಸದೆ ಹೋದರೆ ಹೊಣೆಯು ನೀನೆ,
ತುಟಿಯಲಿ ಮರೆತ ನಗುವ ತರಿಸು
ತರಿಸದೇ ಹೋದರೆ ಹೊಣೆಯು ನೀನೆ,
ಬದುಕಲಿ ಕಳೆದೋದ ಸ್ಪೂರ್ತಿಯ ಕೊಡಿಸು
ಕೊಡಿಸದೇ ಹೋದರೆ ಹೊಣೆಯು ನೀನೆ,
ನೀ ಬಯಸಿದ್ದೆಲ್ಲ ಕೊಟ್ಟವಳು ನಾನು,
ನಾ ಕೇಳಿದ್ದೆಲ್ಲ ಸಾಧಿಸೋನೆ ನೀನು,
ಸಾಧಿಸದಿದ್ದರೆ ಸಾವಾಗು
ಪ್ರೀತಿಯೊಂದಿಗೆ ನನ್ನ ಕರೆದೊಯ್ಯು .

ಹಣೆಯ ಬರಹಕೆ ಹೊಣೆಯು ಯಾರು?

ಗೆಳಯನೇ ಬರೆಯುವೆ ಪುಟಾಣಿ ಪತ್ರ,
ಸಮಯವ ಸಿಕ್ಕಾಗ ಕೊಡುವೆಯ ಉತ್ರ?
ದಿನವು ಕಾಣುತಿತ್ತು ನಿನ್ನೊಂದಿಗೆ ಕನಸು,
ಇಹದ ಪರಿವೆಯೇ ಇಲ್ಲದೆ ಈ ಮನಸು,
ಇದು ಯಾರಾ ತಪ್ಪು?
ಮನದ ಕೋಣೆಯೊಳಗೆ ನಿನ್ನದೇ ನಗುವು,
ಕೇಳುತ ಕೇಳುತ ನಾನಾದೆ ತೊಟ್ಟಿಲೋಳಗಿನ ಮಗುವು,
ಹೆಜ್ಜೆಹೆಜ್ಜೆಗೂ ನೆನಪಿಸಿಕೊಳ್ಳುತ ನಿನ್ನನೆ,
ಈಗ ಮರೆತಿರುವೆ ನಾನು ನನ್ನನೆ,
ಇದು ಯಾರಾ ತಪ್ಪು?
ಪ್ರಿತಿಸುವಾಗ ನಿನಗೆ ನೆನಪಾಗಲಿಲ್ಲ ಹೆತ್ತವರು,
ನನ್ನೊಂದಿಗೆ ಎಳೆಜ್ಜೆ ಇಡು ಎಂದಾಗೆಲ್ಲಿಂದ ಬಂದರವರು,
ಪ್ರಿತಿಸಿದೆ ನಿನ್ನ ನಾ ಪ್ರೇಮಿಯಾಗಿ,
ಬಿಟ್ಟುಹೊದೆ ನೀ ನನ್ನಾ ಒಂಟಿಯಾಗಿ,
ಇದು ಯಾರಾ ತಪ್ಪು?
ಪ್ರೀತಿ ಅರಮನೆ ಕಟ್ಟುವಾಗ ಕನಸು ಶಿಲ್ಪಿಯಾಯ್ತು,
ಅರಮನೆ ಬಿದ್ದಾಗ ಬದುಕು ಪಾಠವಾಯ್ತು,
ನಿನ್ನಾ ಪ್ರಶ್ನಿಸೇನು ಪ್ರಯೋಜನ ಗೆಳೆಯಾ?
ಹಣೆಯ ಬರಹಕೆ ಹೊಣೆಯು ಯಾರು?

ನೆನಪುಗಳು

ಇಷ್ಟಕಷ್ಟಗಳ ಪರಿವಿಲ್ಲವು
ಈ ನನ್ನ ಮನಸ್ಸಿಗೆ,
ನೋವು ನಲಿವುಗಳ ಸುಳಿವಿಲ್ಲವು
ಈ ನನ್ನ ನಗುವಿಗೆ,
ನಿನ್ನ ನೆನಪುಗಳು ತುದಿಮೊದಲಿಲ್ಲದೆ ಆಗಮಿಸಲು.

ಗೊತ್ತಿಲ್ಲದೇ ಬಂದು ಗೊತ್ತಾಗೊಹಾಗೆ ಮರೆಯಾದ ಸ್ನೇಹ

ಗೊತ್ತಿಲ್ಲದೇ ಗೊತ್ತಾಗೊಹಾಗೆ
ನಿನ್ನ ಪರಿಚಯವಾಯಿತು,
ಗೊತ್ತಿದ್ದೂ ಗೊತ್ತಾಗದಂತೆ
ನಿನ್ನ ಸ್ನೇಹವಾಯಿತು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಸ್ನೇಹವು ಪ್ರೇಮವಾಯಿತು,
ಗೊತ್ತಿದ್ದೂ ಗೊತ್ತಾಗದಂತೆ
ಪ್ರೇಮವೇ ಬದುಕಾಯಿತು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಪ್ರೆಮವಿಲ್ಲದೆ ಬಾಳದಾಯಿತು,
ಗೊತ್ತಿದ್ದೂ ಗೊತ್ತಾಗದಂತೆ
ಅ ಬದುಕೇ ಉರುಳಾಯಿತು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಬದುಕನ್ನೇ ಬಲಿತೆಗೆದುಕೊಂಡಿತು,
ಗೊತ್ತಿದ್ದೂ ಗೊತ್ತಾಗದಂತೆ
ಬದುಕಿರುವ ಜೀವಂತ ಶವ ನಾನು,
ಗೊತ್ತಿಲ್ಲದೇ ಗೊತ್ತಾಗೊಹಾಗೆ
ಗೊತ್ತಿದ್ದೂ ನನ್ನ ಬದುಕಿಗೆ
ಬಂದ ಸ್ನೇಹ ಗೊತ್ತಾಗುದರೊಳಗೆ
ಗೊತ್ತಿಲ್ಲದಂತೆ ಮರೆಯಾಯಿತು.

ನೀನಿಲ್ಲದೆ ಬಾಳಿಗೆ ಅರ್ಥವೆಲ್ಲಿ???

ನೆನಪಾದೆ ನೀ ನನ್ನ ನೋವೆಂಬ ನಲಿವಲ್ಲಿ,
ಜೊತೆಯಾದೆ ನೀ ನನ್ನ ನಗುವೆಂಬ ಅಳುವಲ್ಲಿ,
ಹೊಂಗಿರಣವಾದೆ ನೀ ನನ್ನ ಕತ್ತಲೆಯ ಬಾಳಲ್ಲಿ,
ಬಿಂಬವಾಗಿ ನಿಂತೇ ನೀ ನನ್ನ ಕಾಣಿಸದ ಕಣ್ಣಲ್ಲಿ,
ನಗುವಾದೆ ನೀ ನನ್ನ ಬಾಡಿಹೋದ ಮೊಗದಲ್ಲಿ,
ಸಂಗಾತಿಯದೆ ನೀ ನನಗೆ ಮರೆಯಲಾಗದ ಒಂಟಿತನದಲ್ಲಿ ,
ಈಗ್ಯಾಕೋ ಬದುಕಬೇಕೆನ್ನೋ ಸ್ಪೂರ್ತಿ ನನ್ನಲ್ಲಿ,
ಪ್ರತಿಷ್ಟಾಪಿಸಿಬಿಟ್ಟೆ ನಿನ್ನ ಈ ನನ್ನ ಹ್ರದಯದಲ್ಲಿ,
ದುರಾಗಿಸದಿರು ನನ್ನ ಈ ನಿನ್ನ ಬದುಕಲ್ಲಿ,
ಸಂಗಾತಿಯಾಗಿ ಉಳಿಸು ಈ ನಿನ್ನ ಬಾಳಲ್ಲಿ,
ನೀನಿಲ್ಲದೆ ಈ ಬದುಕಿಗೆ ಅರ್ಥವೆಲ್ಲಿ?

ಭಾವನೆಯೇ ಬದುಕಲ್ಲ ......ಎದ್ದೇಳು ಗೆಳೆಯಾ......

ಗೆಳೆಯಾ ಭಾವನೆಯಲ್ಲಿ ಬದುಕಿಲ್ಲ,
ಭಾವನೆಗಿಲ್ಲಿ ಕವಡೆಕಾಸಿನ ಬೆಲೆಯಿಲ್ಲ,
ಭಾವನೆಯ ದೂರೀಕರಿಸಿ ಬದುಕಿಲ್ಲಿ,
ಸ್ವಾರ್ಥಿಗಳೇ ತುಂಬಿರುವ ಜಗವಿಲ್ಲಿ,
ಭಾವನೆ ಅನ್ನೋದು ಇರಲಿ ಮನದಲ್ಲಿ,
ತೋರ್ಪಡಿಸಿ ಕೊಳ್ಳದಿರೆಂದು ಜಗಕಿಲ್ಲಿ,
ನೀ ಬಾಗಿದರೆ ಮೆಟ್ಟೂ ಜನರಿಲ್ಲಿ.
ಎದ್ದರೆ ಬಗ್ಗೋ ಜನರು ಇಹರಿಲ್ಲಿ,
ಎದ್ದೇಳು ಗೆಳೆಯಾ ಬದುಕಿಹುದು ಎದ್ದರಿಲ್ಲಿ

ಹುಡುಕುತ್ತಿರುವೆ ಕಳೆದುಹೋದ ನಿದ್ರೆಯ?

ಇರುಳು ನಸುನಚುತ್ತಾ ಜಾರಿತು,
ನಿದ್ರೆಯನ್ನಂತು ನನ್ನಿಂದ ದೂರ ಮಾಡಿತು,
ಕಣ್ಮುಚ್ಚಿದರೆ ನನ್ನೆದುರು ಅವನೇ,
ಕಣ್ತೆರೆದರೆ ದೂರಾಗಲರ ತಾನೆ,ರಾತ್ರಿಯಲ್ಲಿ ನಾ ಪಡುವ ಪಾಡು,
ಆತನಿಗೆ ಅರ್ಥವಾಗುವ ಹಾಗೆಮಾಡು,
ನಿನಾಗಿದ್ದೆ ದೇವಾ ನನ್ನ ಕಣ್ಣಾಗಿ,
ಆದರೀಗ ಏಕೆ ನಿಂತಿಹೆ ಕಲ್ಲಾಗಿ?
ವಿರಹವೆನ್ನೋ ಪ್ರಪಾತದೊಳಗೆ ದುಡಿದಾ,
ಅತ ಮಾತ್ರ ಪರಾರಿಯಾಗಿ ಓಡಿದ,
ಪ್ರೀತಿಯ ಹೊಳೆಯನ್ನೇ ಹರಿಸಿದಾ,
ನಾ ಹೊಳೆಗಿಳಿಯುವ ಮುನ್ನ ಪ್ರಿತಿನೆ ಸಾಯಿಸಿದ,
ಇರುಳಲ್ಲಿ ಉಳಿದ ಅತ ನನ್ನ ನೆನಪಾಗಿ,
ಹಗಲಲ್ಲಿ ಓಡುವ ಮರೆಯಾಗಿ,
ಕಾರಣವ ಈಗ ಹುಡುಕಾಡುತ್ತಿರುವೆ,
ಕಳೆದು ಹೋದ ನಿದ್ರೆಯ ತಡಕಾಡುತ್ತಿರುವೆ,
ದಿನಕಳೆದಂತೆ ನಿದ್ರೆಗಾಗಿ ತಡಕಾಡುವ ಇರುಳು,
ಕಳೆದು ಹೋದ ಬದುಕ ಹುಡುಕಾಡುವ ಹಗಲು,
ಮತ್ತದೇ ರಾತ್ರಿ ಸೂರ್ಯ ಮರೆಯಾದ,
ಚಂದ್ರ ನಗುನಗುತ್ತ ಬಾನೇರಿದ,
ಕಣ್ಣು ಮಾತ್ರ ಮುಚ್ಚಲು ಮುಷ್ಕರ ಹೂಡಿವೆ,
ಅವು ಶುನ್ಯದತ್ತ ದ್ರಷ್ಟಿ ಬೀರಿವೆ.

ಪುಟ್ಟ ಜಾಗ

ಎಲ್ಲಿಯೋ ಹುಡುಕುತಿದ್ದೆ
 ಹಾಗೆಂದು ಕಳೆದು ಹೋಗಿರಲಿಲ್ಲ,
ಕಳೆದು ಹೋದದ್ದೇ ಹುಡುಕಬೇಕೆಂಬ
 ನಿಯಮವೇನಿರಲಿಲ್ಲ,
ನನ್ನ ಭಾವನೆಯಲ್ಲಿ ಹುಟ್ಟಿದ
 ಕಂದಮ್ಮಗಳಿಗೆ ಮನೆಯಿರಲಿಲ್ಲ
ಹುಡುಕುತಿದ್ದೆ ನಾನು 
ಹಾಗೆಂದು ಸಿಗದೇ ಏನು ಹೋಗಲಿಲ್ಲ,
ಸಿಕ್ಕಿತೊಂದು ಪುಟ್ಟ ಜಾಗ 
ನನ್ನ ಕವನಗಳೆಂಬ ಕಂದಮ್ಮಗಳಿಗೆ
ಅದು ಸಿಕ್ಕು ಕೂಡ 
ನನ್ನ ಕಂದಮ್ಮಗಳ ಬಿಡದೆ ಹೋದರೆ 
ತಪ್ಪಲ್ಲವೇ??

ವಿಪರ್ಯಾಸ

ಇಂದು ಅರಳಿ ಕನಿಷ್ಠ ದಿನದ
ಬದುಕ ಹೊಂದಿರುವ ಹೂವಂತೆ
ನೀನಾದೆ ನನ್ನ ಬಾಳಿಗೆ ಗೆಳತಿ,
ಒಂದೊಮ್ಮೆ ಮೊಗ್ಗಾಗಿ ಮಗುವಂತೆ
ನನ್ನ ಸೆಳೆದೆ,
ಮತ್ತೊಮ್ಮೆ ಹೂವಾಗಿ ಅರಳಿ
ನನ್ನೇ ಆಕರ್ಷಿಸಿದೆ,
ನಾ ಹತ್ತಿರ ಬರುವಾಗ ನಿ
ಯಾರದೋ ಮುಡಿಸೇರಿದೆ.